Monday, August 8, 2022

ಟ್ಯೂಷನ್’ಗೆ ಹೋಗಿದ್ದ ಏಳು ವರ್ಷದ 15 ಮಕ್ಕಳಿಗೆ ಕೊರೋನಾ ಸೋಂಕು!

Follow Us

newsics.com
ಹೈದರಾಬಾದ್: ಗುಂಟೂರು ಜಿಲ್ಲೆಯಲ್ಲಿ ಟ್ಯೂಷನ್’ಗೆ ಹೋಗಿದ್ದ 15 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ.
ಕೊರೋನಾ ಸೋಂಕಿತ ಎಲ್ಲ ಮಕ್ಕಳು ಏಳು ವರ್ಷದವರಾಗಿದ್ದು, ಎಲ್ಲ ಮಕ್ಕಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೋಂಕಿತ ಮಕ್ಕಳು ಗುಂಟೂರು ಜಿಲ್ಲೆಯ ಭಟ್ಲೂರಿನವರಾಗಿದ್ದಾರೆ. ಈ ಮಕ್ಕಳಿಂದ 35 ಕ್ಕೂ ಹೆಚ್ಚು ಪೋಷಕರಿಗೆ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧವಿದ್ದರೂ ಭಟ್ಲೂರಿನ ಖಾಸಗಿ ಟ್ಯೂಷನ್ ಸಂಸ್ಥೆಯೊಂದು ನಡೆಸುತ್ತಿದ್ದ ಟ್ಯೂಷನ್’ಗೆ ಈ ಮಕ್ಕಳು ಹಾಜರಾಗಿರುವುದು ಇವರಿಗೆಲ್ಲ ಕೊರೋನಾ ಸೋಂಕು ತಗುಲಲು ಕಾರಣ ಎನ್ನಲಾಗಿದೆ. ಭಟ್ಲೂರಿನಲ್ಲಿ ಈಗಾಗಲೇ ಜಿಲ್ಲಾಡಳಿತ ಸ್ಯಾನಿಟೈಸೇಶನ್ ಮಾಡಿದ್ದು, ಬಿಗಿ ಕ್ರಮ ಕೈಗೊಂಡಿದೆ. ಖಾಸಗಿ ಟ್ಯೂಷನ್ ಸಂಸ್ಥೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂಪಾಯಿ ದಂಡ: ಆದೇಶ ಜಾರಿ

ನೂರಾರು ಆನೆಗಳ ಜೀವಕ್ಕೆ ಕಂಟಕವಾಯ್ತು ಪಾಚಿ ವಿಷ!

ಮತ್ತಷ್ಟು ಸುದ್ದಿಗಳು

vertical

Latest News

ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ದಂತ ವೈದ್ಯೆ

newsics.com ಬೆಂಗಳೂರು: ತನ್ನ 9 ವರ್ಷದ ಮಗಳನ್ನು ನೇಣು ಬಿಗಿದು ಕೊಂದ ದಂತ ವೈದ್ಯೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಬೆಂಗಳೂರು ಬನಶಂಕರಿಯ ಕಾವೇರಿನಗರದ ಕೃಷ್ಣಾ ಗ್ರಾಂಡ್ ಬಳಿ ಈ ಘಟನೆ...

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ ಪೊಲೀಸರಿಗೆ ಈ ಸಂಬಂಧ ದೂರು ನೀಡಲಾಗಿದೆ. ಸುನಾಮಿ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...
- Advertisement -
error: Content is protected !!