Wednesday, July 6, 2022

ಜಗತ್ತಿನಲ್ಲೀಗ 1.70 ಕೋಟಿ ಕೊರೋನಾ ಸೋಂಕಿತರು

Follow Us

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಅಬ್ಬರ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 1,70, 67,754 ಕ್ಕೆ ಏರಿಕೆಯಾಗಿದೆ. 6,67,935 ಮಂದಿ ಕೊನೆಯುಸಿರೆಳೆದಿದ್ದಾರೆ.
ಕೊರೋನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 52,123 ಕೊರೋನ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 755 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಕೊರೋನ ಸೋಂಕಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, 34,968 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 10,20,582 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ದೇಶದಲ್ಲಿ 5,28,242 ಸಕ್ರಿಯ ಪ್ರಕರಣಗಳು ಇವೆ. ಇದರೊಂದಿಗೆ ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರವವರ ಪ್ರಮಾಣ ಶೇ. 64.44ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರವವರ ಪ್ರಮಾಣ ಶೇ. 64.44ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಜುಲೈ 29ರವರೆಗೆ ಒಟ್ಟು 1,81,90,382 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಬುಧವಾರ ಒಂದೇ ದಿನ 4,46,642 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಅಯೋಧ್ಯೆಯ ರಾಮಮಂದಿರ ಅರ್ಚಕರಿಗೆ ಕೊರೋನಾ ಸೋಂಕು

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!