ತಿರುವನಂತಪುರಂ: ಕೇರಳದಲ್ಲಿ ಒಟ್ಟು 1053 ಜನರನ್ನು ನೋವೆಲ್ ಕೊರೋನಾ ವೈರಸ್ ಸೋಂಕಿನ ತಪಾಸಣೆಗೊಳಪಡಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ.
1038 ಜನರನ್ನು ಅವರ ಮನೆಗಳಲ್ಲೇ ತಪಾಸಣೆ ನಡೆಸಲಾಗುತ್ತಿದೆ. ಏಳು ಜನರನ್ನು ಗುರುವಾರವೇ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದರು.
24 ಶಂಕಿತರ ರಕ್ತದ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು, ಇವರಲ್ಲಿ 15 ಜನರಲ್ಲಿ ಸೋಂಕು ಕಂಡುಬಂದಿಲ್ಲ. ಉಳಿದ ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.
ಕೊರೋನಾ ವೈರಸ್; ಕೇರಳದಲ್ಲಿ 1053 ಜನರ ತಪಾಸಣೆ
Follow Us