newsics.com
ನವದೆಹಲಿ: ಕಪ್ಪುರಂಧ್ರಗಳ ಸುತ್ತ ಕಾಸ್ಮಿಕ್ ಎಕ್ಸ್‌ರೇಗಳು ಇರುವುದನ್ನು ಖಗೋಳವಿಜ್ಞಾನಿ ಸುದೀಪ್ ಭಟ್ಟಾಚಾರ್ಯ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ಮುಂಬೈ ಮೂಲದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್)ನ ಖಗೋಳವಿಜ್ಞಾನಿ ಸುದೀಪ್ ಭಟ್ಟಾಚಾರ್ಯ ಅವರ ಈ ಸಂಶೋಧನೆ ಕಪ್ಪುರಂಧ್ರಗಳ ಕುರಿತ ಅಧ್ಯಯನಕ್ಕೆ ಮತ್ತಷ್ಟು ನೆರವಾಗಲಿದೆ.
ಸುದೀಪ್ ಭಟ್ಟಾಚಾರ್ಯ ನೇತೃತ್ವದ ತಂಡವು, ಈ ಕಪ್ಪುರಂಧ್ರಗಳ ಬಳಿ ಕಾಸ್ಮಿಕ್ ಎಕ್ಸ್‌ರೇ ಅಸ್ತಿತ್ವವನ್ನು ಪತ್ತೆ ಹಚ್ಚಿರುವುದು ಇವುಗಳ ಎಲ್ಲೆಯನ್ನು ಗುರುತಿಸಲು ಹಾಗೂ ಈ ಬ್ರಹ್ಮಾಂಡ ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿರುವ ಅಗಾಧ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
‘ಈ ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತಲೂ ಹತ್ತುಪಟ್ಟು ದ್ರವ್ಯರಾಶಿ ಹೊಂದಿರುವ ಕಪ್ಪುರಂಧ್ರಗಳಿವೆ. ನ್ಯೂಟ್ರಾನ್ ತಾರೆಗಳು ಹಾಗೂ ಕಪ್ಪುರಂಧ್ರಗಳ ನಡುವಿನ ವ್ಯತ್ಯಾಸ ತಿಳಿಯಲು ಈ ಸಂಶೋಧನೆ ನೆರವಾಗಲಿದೆ’ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಕೆಲ ವಾರಗಳಲ್ಲೇ ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ v ಅಂತಿಮ ಪ್ರಯೋಗ
ಸಿಬಿಎಸ್‌ಇ ವಿದ್ಯಾರ್ಥಿಗಳ ಹಿತರಕ್ಷಣೆ; ಯುಜಿಸಿ, ಸಿಬಿಎಸ್‌ಇಗೆ ಸುಪ್ರೀಂ ಸೂಚನೆ