Saturday, April 17, 2021

ಯೋಧರ ಬಲಿದಾನವನ್ನು ಮರೆಯಲಾರೆವು : ಪ್ರಧಾನಿ ಮೋದಿ

ನವದೆಹಲಿ:  ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ ಹುತಾತ್ಮರಾದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ಅತ್ಯಂತ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ  ನಮ್ಮ ಜನರನ್ನು ಅವರು ರಕ್ಷಿಸಿದ್ದಾರೆ. ಅವರ ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಂದ್ವಾರದಲ್ಲಿ ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರನ್ನು ಒತ್ತೆಸೆರೆಯಲ್ಲಿರಿಸಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾಪಡೆಗಳು ಹೊಡೆದುರುಳಿಸಿದ್ದವು. 12 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ  ಕರ್ನಲ್ ಅಶುತೋಷ್ ಶರ್ಮಾ,  ಮೇಜರ್ ಅನೂಜ್ ಸೂದ್, ರಾಜೇಶ್ ಕುಮಾರ್, ದಿನೇಶ್ ಸಿಂಗ್ ಮತ್ತು ಸಬ್ ಇನ್ಸ್ ಪೆಕ್ಟ ರ್  ಶಕೀಲ್ ಖಾಜಿ  ವೀರ ಮರಣವನ್ನಪ್ಪಿದ್ದರು

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!