newsics.com
ದೆಹಲಿ : ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುವ ದಂಪತಿ ಬಾಡಿಗೆ ತಾಯಿಗೆ ಮೂರು ವರ್ಷಗಳ ಆರೋಗ್ಯ ವಿಮೆಯನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇತ್ತೀಚಿಗೆ ಹೊರಡಿಸಲಾದ ಬಾಡಿಗೆ ತಾಯ್ತನ ನಿಯಮಗಳ ಪ್ರಕಾರ, ವಿಮಾ ಮೊತ್ತವು ಗರ್ಭಾವಸ್ಥೆಯಿಂದ ಉಂಟಾಗುವ ತೊಂದರೆಗಳು ಹಾಗೂ ಪ್ರಸವದ ಬಳಿಕದ ವೆಚ್ಚವನ್ನು ಸರಿದೂಗಿಸುವಂತಿರಬೇಕು. ಬಾಡಿಗೆ ತಾಯಿಯ ಮೇಲೆ ಯಾವುದೇ ಬಾಡಿಗೆ ತಾಯ್ತನದ ಪ್ರಕ್ರಿಯೆಯ ಮೂರು ಪ್ರಯತ್ನಗಳನ್ನು ಮಾತ್ರ ಸರ್ಕಾರ ಅನುಮತಿಸಿದೆ.