Wednesday, October 5, 2022

ಪತ್ನಿಗೆ ಪ್ರತಿ ತಿಂಗಳು 1.5 ಲಕ್ಷ ನೀಡಲು ಉದ್ಯಮಿಪತಿಗೆ ಕೋರ್ಟ್ ಸೂಚನೆ

Follow Us

newsics.com
ಮುಂಬೈ: ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ನಿರ್ವಹಣಾ ವೆಚ್ಚ ನೀಡುವಂತೆ ಪತ್ನಿ ತೊರೆದ ಉದ್ಯಮಿಗೆ ಕೋರ್ಟ್ ಸೂಚಿಸಿದೆ.
ಪತಿ ದೈಹಿಕ ಕಿರುಕುಳ ನೀಡಿದ್ದರಿಂದ ತಾನು ಅನಾರೋಗ್ಯಕ್ಕೆ ತುತ್ತಾಗಿ ಪೈಲಟ್‌ ಉದ್ಯೋಗ ಬಿಡಬೇಕಾಯಿತು. ಹೀಗಾಗಿ ಗಂಡನಿಂದ ಸೂಕ್ತ ಪರಿಹಾರ ಕೋರಿ ಕೋರ್ಟ್‌ನ ಮೆಟ್ಟಿಲೇರಿದ್ದಳು. ನನ್ನ ಗಂಡ ವಾರ್ಷಿಕವಾಗಿ 18 ಕೋಟಿ ರೂ. ಆದಾಯ ಹೊಂದಿದ್ದಾನೆ. ಕೆಲಸ ಕಳೆದುಕೊಂಡಿರುವ ನಾನು ಅಪ್ಪನ ಆಸರೆಯಲ್ಲಿದ್ದೇನೆ ಎಂದು ಪತ್ನಿ ನ್ಯಾಯಪೀಠದ ಮುಂದೆ ಅಳಲು ತೋಡಿಕೊಂಡಿದ್ದಳು.
ವಿಚಾರಣೆ ನಡೆಸಿದ ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್, ಪೈಲಟ್‌ ವೃತ್ತಿಯಲ್ಲಿದ್ದ ಪತ್ನಿಯನ್ನು ತೊರೆದಿರುವ ಉದ್ಯಮಿಗೆ ಪ್ರತಿ ತಿಂಗಳು 1.5 ಲಕ್ಷ ರೂ. ನಿರ್ವಹಣಾ ವೆಚ್ಚ ನೀಡಬೇಕು ಎಂದು ಆದೇಶ ನೀಡಿದೆ. ಪತ್ನಿಯನ್ನು ಸಾಕುವುದು ಪತಿಯ ಕರ್ತವ್ಯ. ಆಕೆಯ ನಿತ್ಯದ ಪ್ರತಿ ಅವಶ್ಯಕತೆಗಳನ್ನೂ ಪತಿಯೇ ಭರಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಪತ್ನಿ ಸಲ್ಲಿಸಿದ್ದ ಅರ್ಜಿಯ ದಿನಾಂಕದಿಂದ ಇಲ್ಲಿಯವರೆಗೆ ಪತಿ ಒಟ್ಟು 42 ಲಕ್ಷ ರೂ. ಪರಿಹಾರ ಪಾವತಿಸಬೇಕಾಗಿದೆ.

ಮುರಿದುಬಿದ್ದ ಮದುವೆ; ನೊಂದ ಯುವತಿ ಆತ್ಮಹತ್ಯೆ

ದೀಪ್ತಿ ಭದ್ರಾವತಿಯವರಿಗೆ ವಿಭಾ ಸಾಹಿತ್ಯ ಪುರಸ್ಕಾರ

ಅಗಲಿದ ಪುತ್ರನ ಪ್ರೀತಿಯ ಪ್ರಾರ್ಥನಾ ಗೀತೆ ಹಾಡಿದ ಬೈಡನ್

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!