newsics.com
ಮುಂಬೈ: ದೇಶದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಆಕ್ಸ್ಫರ್ಡ್ ಕೋವಿಡ್ -19 ಲಸಿಕೆ ಮಾನವ ಪ್ರಯೋಗ ಆರಂಭವಾಗಿದ್ದು, 100 ಜನರನ್ನು ಲಸಿಕೆ ಪ್ರಯೋಗ ಪೂರ್ವ ಟೆಸ್ಟ್ ಗಳಿಗೆ ಒಳಪಡಿಸಲಾಗುತ್ತಿದೆ.
ಮುಂಬೈನ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆ ಹಾಗೂ ಬೃಹನ್ಮುಂಬೈ ಮುನಿಷಿಪಲ್ ಕಾರ್ಪೋರೇಶನ್ ನಿರ್ವಹಿಸುತ್ತಿರುವ ಬಿ.ವೈ.ಎಲ್.ನಾಯರ್ ಆಸ್ಪತ್ರೆಗೂ ಲಸಿಕೆ ಪ್ರಯೋಗಕ್ಕೆ ಅವಕಾಶ ದೊರೆತಿದೆ. ಎರಡು ಆಸ್ಪತ್ರೆಗಳು ಸೇರಿ ಒಟ್ಟು 200 ಜನರ ಮೇಲೆ ಲಸಿಕೆಯ 2 ಮತ್ತು ಮೂರನೇ ಹಂತದ ಪ್ರಯೋಗ ನಡೆಸಲಿದ್ದಾರೆ.
ಕೋವಿಶಿಲ್ಡ್ ಲಸಿಕೆ ಪ್ರಯೋಗಕ್ಕೆ ಮುನ್ನ ಆಯ್ದ ಪ್ರಯೋಗಕ್ಕೆ ಒಳಗಾಗುವವರಿಗೆ ಆರ್‍ಟಿ-ಪಿಸಿಆರ್ ಮತ್ತು ಆಂಟಿಜೆನ್ ಟೆಸ್ಟ್ ಮಾಡಲಾಗುತ್ತಿದ್ದು, ಈ ಪರೀಕ್ಷೆಗಳಲ್ಲಿ ನೆಗೆಟಿವ್ ರಿಪೋರ್ಟ್ ಬಂದವರ ಮೇಲೆ ಮಾತ್ರ ಲಸಿಕೆ ಪ್ರಯೋಗ ನಡೆಯಲಿದೆ.
ಪುಣೆಯ ಸೆರಮ್ ಇನ್‍ಸ್ಟ್ಯಿಟ್ಯೂಟ್ ಆಫ್ ಇಂಡಿಯಾ ಮತ್ತು ಬ್ರಿಟಿಷ್ ಸ್ಪೀಡಿಸ್ ಫಾರ್ಮಾ ಕಂಪನಿ ಆಸ್ಟ್ರಾಜೆನೆಕಾ ಜತೆ ಈ ಲಸಿಕೆ ತಯಾರಿಕಾ ಒಪ್ಪಂದ ಮಾಡಿಕೊಂದಿದ್ದು, ಪುಣೆಯಲ್ಲೂ ಲಸಿಕೆಯ ಮಾನವ ಪ್ರಯೋಗ ಪ್ರಗತಿಯಲ್ಲಿದೆ.
ಮುಂಬೈನಲ್ಲಿ ಆಕ್ಸ್ಫರ್ಡ್ ಲಸಿಕೆ ಮಾನವ ಪ್ರಯೋಗ ಆರಂಭ
Follow Us