ಭೋಪಾಲ್: ಮನುಷ್ಯರ ಸ್ವಯಂವರದ ಕುರಿತು ನೀವು ಕೇಳಿಯೇ ಇರುತ್ತೀರಿ. ಗೋವುಗಳ ಸ್ವಯಂವರದ ಕುರಿತು ಕೇಳಿದ್ದೀರಾ!
ಭೋಪಾಲ್ ನಲ್ಲಿ ಪಶು ಸಂಗೋಪನಾ ಇಲಾಖೆ ಗೋ ಸ್ವಯಂವರ ಹಮ್ಮಿಕೊಂಡಿದೆ. ಇಲ್ಲಿ ಬಲಿಷ್ಠ ಗೋವು ಮತ್ತು ಹೋರಿಗಳ ಜಾತಕ(!) ವನ್ನು ಹೊಂದಿಸಲಾಗುತ್ತದೆ. ಅಂದರೆ, ಅವುಗಳ ತಳಿ, ವಯಸ್ಸು, ಮತ್ತು ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಕೆ ಮಾಡಲಾಗುತ್ತದೆ. ಇದರಲ್ಲಿ ಸುಮಾರು 200 ಹೋರಿಗಳು ಮತ್ತು ಹಸುಗಳು ಭಾಗವಹಿಸಲಿವೆ ಎಂದು ಇಲಾಖೆ ತಿಳಿಸಿದೆ.