newsics.com
ತಿರುವನಂತಪುರ: ಸಿಪಿಐ(ಎಂ)ನ ಹಿರಿಯ ನಾಯಕ, ಮಾಜಿ ಶಾಸಕ ಬಿ. ರಾಘವನ್(69) ಅವರು ಮಂಗಳವಾರ ಕೊರೋನಾದಿಂದ ನಿಧನರಾದರು.
ಕೊಲ್ಲಂನ ಪರಿಪಲ್ಲಿ ಮೆಡಿಕಲ್ ಕಾಲೇಜಿನಲ್ಲಿ ರಾಘವನ್ ಮತ್ತು ಅವರ ಕುಟುಂಬದ ಸದಸ್ಯರು ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಾಘವನ್ ಅವರ ಪರಿಸ್ಥಿತಿ ಗಂಭೀರವಾದ್ದರಿಂದ ಅವರನ್ನು ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಘವನ್ ಅವರು ಮಂಗಳವಾರ ಬೆಳಗಿನ ಜಾವ 4.45ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1987ರಲ್ಲಿ ನೆಡವತ್ತೂರು ಕ್ಷೇತ್ರದಿಂದ ಮೊದಲ ಬಾರಿ ಕೇರಳ ವಿಧಾನಸಭೆಗೆ ಆಯ್ಕೆಯಾಗಿದ್ದರು. 1991ರಲ್ಲಿ ಮತ್ತೆ ವಿಜಯ ಸಾಧಿಸಿದ್ದರು. ಆದರೆ 1996ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. 2006ರಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಡಿದ್ದರು.
ಜಿಂಕೆಯಲ್ಲೂ ಕಾಣಿಸಿಕೊಂಡ ಹೊಸ ರೋಗ
ಬೆಂಗಳೂರು ಹಿಂಸಾಚಾರ: ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ