Tuesday, March 2, 2021

ಮಂಗೋಲಿಯಾದಿಂದ ರಾಜಸ್ಥಾನಕ್ಕೆ ಕ್ರೇನ್ ಪಕ್ಷಿಯ 151 ದಿನಗಳ ಹಾರಾಟ!

NEWSICS.COM

ಜೈಪುರ: ಡೆಮೊಸೆಲ್ ಕ್ರೇನ್ ಎನ್ನವ ಹಕ್ಕಿಯ ಕಾಲಿಗೆ ಟ್ಯಾಗ್ ಕಟ್ಟಿ ಮಂಗೋಲಿಯಾದಿಂದ ರಾಜಸ್ಥಾನಕ್ಕೆ ವಲಸೆ ಬರಲು ತೆಗೆದುಕೊಳ್ಳುವ ಸಮಯ ಮತ್ತು ಅದು ಕ್ರಮಿಸುವ ಹಾದಿಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಜುಲೈ 25 ರಂದು ಉತ್ತರ ಕೊರಿಯಾದ ಗಡಿಯಲ್ಲಿರುವ ಒನಾನ್ ಬಾಲ್ಜ್ ಬೇಸಿನ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಶೋಧಕ ತುವ್ಶಿಂಟಗ್ಸ್ ಸುಖ್‌’ ಬತಾರ್ ಬ್ಯಾಂಡ್ ಟ್ಯಾಗ್ ಮಾಡಿದ್ದಾರೆ. ಅದನ್ನು ಟಿ-54ಎಂದು ಗುರುತುಮಾಡಲಾಗಿತ್ತು. ಈ ಹಕ್ಕಿಯು ಮಂಗೋಲಿಯಾದಿಂದ 151ದಿನಗಳಲ್ಲಿ 4,032 ಕಿ. ಮೀ ಕ್ರಮಿಸಿ ಜೋದ್’ಪುರದ ಖಿಚಾನ್ ತಲುಪಿದೆ ಎನ್ನಲಾಗಿದೆ. ಹಕ್ಕಿಯು ರಾಜಸ್ಥಾನವನ್ನು ತಲುಪುವ ಮೊದಲು ಚೀನಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಬಿಹಾರ ಮತ್ತು ಯುಪಿ ದಾಟಿದೆ. ಹಾಗೂ ಸರಿಸುಮಾರು 26,000 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ.

ಹಕ್ಕಿಯನ್ನು 1,000-ಕ್ರೇನ್ ಪ್ರಾಜೆಕ್ಟ್ ಅಡಿಯಲ್ಲಿ ಟ್ಯಾಗ್ ಮಾಡಲಾಗಿದ್ದು, ಇದರಿಂದ ಕ್ರೇನ್’ ಪಕ್ಷಿಗಳ ಸಂಖ್ಯೆ, ಅವುಗಳ ವಿಶ್ರಾಂತಿ ತಾಣ, ಹಾರಾಟದ ಮಾರ್ಗ ಸೇರಿದಂತೆ ಹವಾಮಾನ ಬದಲಾವಣೆಯ ಪ್ರಭಾವ ಮತ್ತು ಪಕ್ಷಿಗಳ ನಡುವೆ ಸಾಮಾಜಿಕ ರಚನೆಗಳ ಬಗ್ಗೆ ತಿಳಿಯಲು ಈ ಅಧ್ಯಯನ ನಡೆಸಲಾಗಿದೆ. ಹೀಗೆ ವಲಸೆ ಬಂದ ಹಕ್ಕಿಗಳು ಮಾರ್ಚ್’ನಲ್ಲಿ ತವರಿಗೆ ಮರಳುತ್ತವೆ ಎನ್ನಲಾಗಿದೆ.

ಉಸಿರಾಟದ ಸಮಸ್ಯೆ, ಗೊಂದಲ, ನಿರಂತರ ಎದೆನೋವು ಹೊಸ ಕೊರೋನಾದ ಪ್ರಮುಖ ಲಕ್ಷಣ

ಮತ್ತಷ್ಟು ಸುದ್ದಿಗಳು

Latest News

ರಾಮಮಂದಿರ ನಿರ್ಮಾಣಕ್ಕೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹ

newsics.com ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ‌ ಮಂದಿರ ನಿರ್ಮಾಣಕ್ಕೆ ಈ ವರೆಗೆ 2,100ಕೋಟಿ ರೂ. ಸಂಗ್ರಹವಾಗಿದೆ. ಈ ಕುರಿತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ...

ಯುವತಿಯೊಂದಿಗಿನ ವಿಡಿಯೋ: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು

newsics.com ಬೆಂಗಳೂರು: ನೌಕರಿ ಕೊಡಿಸುವುದಾಗಿ ಹೇಳಿ ಯುವತಿಗೆ ಆಮಿಷವೊಡ್ಡಿ ಸಚಿವ ರಮೇಶ್ ಜಾರಕಿಹೊಳಿ ಆಕೆಯನ್ನು ಲೈಂಗಿಕವಾಗಿ ಬಳಕೆಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಿಹಳ್ಳಿ ಆರೋಪಿಸಿ ದೂರು ನೀಡಿದ್ದಾರೆ. ಯಾವುದೇ ನೌಕರಿ ಕೊಡಿಸದಿದ್ದರಿಂದ ಯುವತಿ...

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು ಪ್ರಸಾರ ಮಾಡುತ್ತಿದ್ದ ರಾಜ್ಯ ಸಭಾ ಮತ್ತು...
- Advertisement -
error: Content is protected !!