ಕಟಕ್: ವೆಸ್ಟ್ ಇಂಡೀಸ್ ಜತೆಗಿನ ಅಂತಿಮ ಏಕದಿನ ಪಂದ್ಯವನ್ನು ಭಾರತ 4 ವಿಕೆಟ್ ಗಳಿಂದ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತ್ತು. ರವೀಂದ್ರ ಜಡೇಜಾ ಪಂದ್ಯವನ್ನು ಭಾರತದ ಕಡೆಗೆ ವಾಲುವಂತೆ ಮಾಡಿದರು.
ಆರಂಭಿಕರಾದ ರೋಹಿತ್ ಶರ್ಮಾ 63 ಮತ್ತು ಕೆಎಲ್ ರಾಹುಲ್ 77 ರನ್ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ನಾಯಕ ಕೊಹ್ಲಿ 85 ರನ್ ಸಿಡಿಸಿ ಔಟಾದರು. ನಂತರ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೇದಾರ್ ಜಾಧವ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜತೆಯಾದ ರವೀಂದ್ರ ಜಡೇಜಾ ಅದ್ಭುತ ಆಟವಾಡಿ 31 ಎಸೆತಗಳಲ್ಲಿ 39 ರನ್ ಗಳಿಸಿ ಕೊನೆಯವರೆಗೂ ಔಟಾಗದೇ ಉಳಿದರು. ಶ್ರಾದ್ಧೂಲ್ ಠಾಕೂರ್ 17 ರನ್ ಗಳಿಸಿ ಕೊನೆಯ ರೋಚಕ ಕ್ಷಣಗಳಲ್ಲಿ ಜಡೇಜಾಗೆ ಉತ್ತಮ ಸಾಥ್ ನೀಡಿದರು. ಶ್ರಾದ್ಧೂಲ್ ಕೊನೆಯ ಹಂತದಲ್ಲಿ ಹೊಡೆದ ಒಂದು ಸಿಕ್ಸರ್ ನಿಂದಾಗಿ ಭಾರತಕ್ಕೆ ಬಾಲ್ ಮತ್ತು ಗೆಲುವಿನ ರನ್ ಅಂತರ ಕಡಿಮೆಯಾಯಿತು. ಇದರಿಂದಾಗಿ 48.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಭಾರತ 316 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ವೆಸ್ಟ್ ಇಂಡೀಸ್ ಮಣಿಸಿದ ಭಾರತ; ಸರಣಿ ಗೆದ್ದ ಸಂಭ್ರಮ
Follow Us