newsics.com
ವಡೋದರಾ: ಯುವ ಕ್ರಿಕೆಟ್ ಆಟಗಾರರ ಅವಿ ಬರೋಟ (29) ಹೃದಯಾಘಾತದಿಂದ ನಿಧನಹೊಂದಿದ್ದಾರೆ. 19ರ ಕೆಳಗಿನ ಭಾರತ ತಂಡದ ನಾಯಕರಾಗಿ ಕೂಡ ಅವಿ ಬರೋಟ ಆಯ್ಕೆಯಾಗಿದ್ದರು.
ವಿಕೇಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದ ಅವಿ ಬರೋಟ 2019-20ನೇ ಸಾಲಿನಲ್ಲಿ ಸೌರಾಷ್ಟ್ರ ತಂಡ ರಣಜಿ ಕಪ್ ಗೆದ್ದಾಗ ಅದರ ಸದಸ್ಯರಾಗಿದ್ದರು.
ಅವಿ ಬರೋಟ 21 ರಣಜಿ ಪಂದ್ಯಗಳನ್ನು ಆಡಿದ್ದರು. 38 ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದರು. ಅವಿ ಬರೋಟ ನಿಧನಕ್ಕೆ ಸೌರಾಷ್ಟ್ರ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.