Monday, April 12, 2021

ಬಲ ಹೆಚ್ಚಿಸಿಕೊಂಡ ಚಂಡಮಾರುತ: ನಾಳೆ ಮಧ್ಯಾಹ್ನ ಮಹಾರಾಷ್ಟ್ರಕ್ಕೆ ಎಂಟ್ರಿ

ಮುಂಬೈ:  ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ  ನಿಸರ್ಗ ಚಂಡ ಮಾರುತ ತನ್ನ ಬಲ ಹೆಚ್ಚಿಸಿಕೊಂಡಿದ್ದು, ನಾಳೆ ಮಧ್ಯಾಹ್ನ ಮಹಾರಾಷ್ಟ್ರವನ್ನು ಹಾದುಹೋಗಲಿದೆ. ಚಂಡಮಾರುತದ ಪರಿಣಾಮ ಉತ್ತರ ಮಹಾರಾಷ್ಟ್ರದ ಕರಾವಳಿ ಮತ್ತು ದಕ್ಷಿಣ ಗುಜರಾತ್ ತೀರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಮಹಾರಾಷ್ಚ್ರಕ್ಕೆ ವಿಪತ್ತು ನಿರ್ವಹಣಾ ಪಡೆಯ 10 ತಂಡ ಕಳುಹಿಸಿಕೊಡಲಾಗಿದೆ. ಗುಜರಾತಿಗೆ  11 ತಂಡ ಕಳುಹಿಸಲಾಗಿದ್ದು, ಹೆಚ್ಚುವರಿ 5 ತಂಡ ಕಳುಹಿಸುವಂತೆ ಗುಜರಾತ್ ಸರ್ಕಾರ ಮನವಿ ಮಾಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಮೀನುಗಾರರು ದಡಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ. ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ. ಅಂಕೋಲ ಮತ್ತು ಕಾರವಾರದಲ್ಲಿ ಭಾರೀ ಮಳೆಯಾಗುತ್ತಿದ್ದು,ಮುನ್ನೆಚ್ಚರಿಕೆ ವಹಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!