Tuesday, March 2, 2021

ಭಾರತೀಯ ನೃತ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಸುನಿಲ್ ಕೊಠಾರಿ ಇನ್ನಿಲ್ಲ

NEWSICS.COM

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೃತ್ಯ ವಿಮರ್ಶಕ, ಇತಿಹಾಸಕಾರ, ಹಿರಿಯ ವಿದ್ವಾಂಸ ಸುನಿಲ್ ಕೊಠಾರಿ (87) ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ಭಾನುವಾರ(ಡಿ.27) ಬೆಳಗ್ಗೆ ನಿಧನರಾದರು.
ಇಂದು ಮುಂಜಾನೆಯ ವೇಳೆ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊಠಾರಿ ಕೊನೆಯುಸಿರೆಳೆದರು. ದೆಹಲಿಯಲ್ಲಿ ವಾಸವಾಗಿದ್ದ ಅವರು, ನವೆಂಬರ್ ತಿಂಗಳಲ್ಲಿ ಕೊರೋನಾಗೆ ತುತ್ತಾಗಿದ್ದರು.

ಡಿಸೆಂಬರ್ 20, 1933 ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಬಗ್ಗೆ 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಭರತನಾಟ್ಯ, ಒಡಿಸ್ಸಿ, ಚೌ, ಕಥಕ್ ಮತ್ತು ಕುಚಿಪುಡಿಯ ಅಧ್ಯಯನ ಒಳಗೊಂಡಿದೆ.

1995 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2000ರಲ್ಲಿ ಗೌರವ್ ಪುರಾಸ್ಕರ್ ಅನ್ನು ಗುಜರಾತ್ ಸಂಗೀತ ನಾಟಕ ಅಕಾಡೆಮಿ ನೀಡಿದೆ. ಹಾಗೂ 2001 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2011, ಅವರು ನ್ಯೂಯಾರ್ಕ್’ನ ನೃತ್ಯ ವಿಮರ್ಶಕರ ಸಂಘದ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು.
ನೃತ್ಯ ವಿದ್ವಾಂಸ ಕೊಠಾರಿ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಉದಯ್ ಶಂಕರ್ ಅವರ ಸ್ಥಾನವನ್ನಲಂಕರಿಸಿದ್ದರು.ನ್ಯೂಯಾರ್ಕ್ ವಿಶ್ವವಿದ್ಯಾಲಯದ ನೃತ್ಯ ವಿಭಾಗದಲ್ಲಿ ಫುಲ್‌ಬ್ರೈಟ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಬ್ರಾಡೀ ಲೀ ಖ್ಯಾತಿಯ ಜಾನ್ ಹ್ಯೂಬರ್ ಇನ್ನಿಲ್ಲ

ಮತ್ತಷ್ಟು ಸುದ್ದಿಗಳು

Latest News

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು...

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ ಈ ಪ್ರಶಸ್ತಿ ದೊರಕಿದೆ. ನಾಟಕವನ್ನು ಎಂ.ಸಿ ಕೃಷ್ಣಪ್ರಸಾದ್...

150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ: ಕಂಟೈನ್’ಮೆಂಟ್ ವಲಯವಾದ ಧರ್ಮಶಾಲೆ

newsics.com ಹಿಮಾಚಲ‌ಪ್ರದೇಶ: ಹಿಮಾಚಲ ಪ್ರದೇಶದ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯ ಧರ್ಮಶಾಲೆಯ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಶಾಲೆಯನ್ನು ಕಂಟೈನ್'ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಸನ್ಯಾಸಿಯನ್ನು...
- Advertisement -
error: Content is protected !!