newsics.com
ಮಹಾರಾಷ್ಟ್ರ: ಓದುವ ವಿಚಾರಕ್ಕೆ ತಾಯಿ ಮಗಳ ನಡುವೆ ನಡೆದ ಜಗಳದಲ್ಲಿ ಮಗಳೇ ತಾಯಿಯನ್ನು ಕರಾಟೆ ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ನವೀ ಮುಂಬೈನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
15 ವರ್ಷದ ಮಗಳನ್ನು ಪೋಷಕರು ವೈದ್ಯಕೀಯ ಕೋರ್ಸ್ಗೆ ಸೇರಿಸಬೇಕೆಂದು ಕನಸು ಕಂಡಿದ್ದರು. ಹೀಗಾಗಿ NEET ತರಬೇತಿಗೆ ಸೇರಿಸಲಾಗಿತ್ತು. ಜು.30ರಂದು ಓದುವ ವಿಚಾರವಾಗಿ ತಾಯಿ ಮಗಳ ನಡುವೆ ಜಗಳ ನಡೆದಿದೆ. ಈ ವೇಳೆ ತಾಯಿ ಚಾಕು ತೋರಿಸಿ ಮಗಳನ್ನು ಹೆದರಿಸಿದ್ದು, ತಾಯಿ ನನ್ನನ್ನು ಕೊಲೆ ಮಾಡುತ್ತಾಳೆಂದು ತಿಳಿದು ಮಗಳು ಆಕೆಯನ್ನು ದೂಡಿದ್ದಾಳೆ. ಇದರಿಂದ ತಲೆಗೆ ಪೆಟ್ಟು ಬಿದ್ದು ತಾಯಿ ಪ್ರಜ್ಞೆ ತಪ್ಪಿದ್ದಾಳೆ. ಈ ವೇಳೆ, ಮಗಳು ಮನೆಯಲ್ಲಿದ್ದ ಕರಾಟೆ ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಪೊಲೀಸರು ಪ್ರಶ್ನೆ ಮಾಡಿದಾಗ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ಸುಳ್ಳು ಹೇಳಿದ್ದಾಳೆ.
ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಿದ್ದು ನಿಜಾಂಶ ಹೇಳಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
2028ರ ಒಲಿಂಪಿಕ್ಸ್’ಗೆ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸಲು ಮುಂದಾದ ಐಸಿಸಿ