newsics.com
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ್ ಬಯೋಟೆಕ್ ಮಕ್ಕಳಿಗಾಗಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆ ಬಳಕೆಗೆ ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಶಿಫಾರಸು ಮಾಡಿದೆ
ಎರಡರಿಂದ 18 ವರ್ಷದ ಮಕ್ಕಳಿಗೆ ಈ ಲಸಿಕೆ ಶಿಫಾರಸು ಮಾಡಲಾಗಿದೆ. ಕೊರೋನಾ ಮೂರನೆ ಅಲೆ ಭೀತಿ ಮಧ್ಯೆ ಇದು ಆಶಾವಾದ ಮೂಡಿಸಿದೆ.
ಔಷಧ ಮಹಾ ನಿಯಂತ್ರಕರ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಕೂಡ ಸಮ್ಮತಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.