newsics.com
ನವದೆಹಲಿ: ಕೋವಾಕ್ಸಿನ್ ಕೋವಿಡ್-19 ಲಸಿಕೆಯನ್ನು 2-18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ನೀಡಲು ಅನುಮೋದನೆ ನೀಡಿಲ್ಲ. ಇನ್ನೂ ಮೌಲ್ಯಮಾಪನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ ಪವಾರ್ ಸ್ಪಷ್ಟಪಡಿಸಿದ್ದಾರೆ.
ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವಿಡ್ -19 ಲಸಿಕೆ ಕೊವಾಕ್ಸಿನ್ ಅನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ತಜ್ಞರ ಸಮಿತಿಯು ಶಿಫಾರಸು ಮಾಡಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಮಾಧ್ಯಮಗಳ ವರದಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವೆ ಡಾ ಭಾರತಿ ಪ್ರವೀಣ್ ಪವಾರ್, ಲಸಿಕೆ ಮಕ್ಕಳಿಗೆ ನೀಡುವ ಬಗ್ಗೆ ಮೌಲ್ಯಮಾಪನ ಇನ್ನೂ ನಡೆಯುತ್ತಿದೆ. ಲಸಿಕೆ ನೀಡುವ ಬಗ್ಗೆ ಕೆಲವು ಗೊಂದಲಗಳಿವೆ ಮತ್ತು ತಜ್ಞರ ಸಮಿತಿಯೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಇಲ್ಲಿಯವರೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಇದನ್ನು ಅನುಮೋದಿಸಿಲ್ಲ ಎಂದು ಹೇಳಿದ್ದಾರೆ.