newsics.com
ಒಡಿಶಾ: ಮಗುವಿನ ಜೀವ ಹೋಗಿದೆ ಎಂದು ಹೇಳಿದ ಬಳಿಕ ಪೋಷಕರು ಅಂತ್ಯಕ್ರಿಯೆ ಮಾಡಬೇಕು ಎಂಬುವಷ್ಟರಲ್ಲಿ ಆ ಮಗುವಿಗೆ ಜೀವ ಬಂದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ಜನವರಿ 19ರಂದು ಈ ಘಟನೆ ನಡೆದಿದೆ.
ಕಿಯೋಂಜರ್ ಜಿಲ್ಲೆಯ ಕರಾಂಜಿಯಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಮಗು ಅಳದೇ ಇದ್ದ ಕಾರಣ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಪೋಷಕರು ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎಂಬುವಷ್ಟರಲ್ಲಿ ಮಗು ಅಳಲು ಶುರು ಮಾಡಿದೆ. ಗಾಬರಿಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ವೈದ್ಯರು ಮಗುವನ್ನು ಸರಿಯಾಗಿ ತಪಾಸಣೆ ಮಾಡದೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ ಎಂದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಷ್ಪಾ’ ಚಿತ್ರದಿಂದ ಪ್ರೇರಿತರಾಗಿ ಕೊಲೆ ಮಾಡಿದ ಬಾಲಕರು:ಆರೋಪಿಗಳ ಬಂಧನ