newsics.com
ದೆಹಲಿ: ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಒಂದು ತಿಂಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅಕ್ಟೋಬರ್ 7ವರೆಗೆ ಅವಕಾಶ ನೀಡಲಾಗುವುದು ಎಂದು ಇದೀಗ (ಸೆ. 30) ರಿವರ್ಸ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.
RBI ತಿಳಿಸಿರುವ ಪ್ರಕಟಣೆ ಪ್ರಕಾರ ಅ.7ರವರೆಗೆ ಸಾರ್ವಜನಿಕ ತಮ್ಮ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಹೋಗಿ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಲ್ಲಿಯವರೆಗೆ 2,000 ರೂ. ಕಾನೂನು ಬದ್ಧವಾಗಿ ವಿನಿಮಯ ಅವಕಾಶ ಇದೆ ಎಂದು ಹೇಳಿದೆ.
ಅಕ್ಟೋಬರ್ 7ರ ನಂತರವೂ ಗ್ರಾಹಕರು ಈ ನೋಟುಗಳನ್ನು RBI ನಿಗದಿಪಡಿಸಿರುವ 19 ಕಛೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಈ ಮೊತ್ತವನ್ನು RBI ನಿಗದಿಪಡಿಸಿರುವ 19 ಕಛೇರಿಗಳ ಮೂಲಕವೂ ವ್ಯಕ್ತಿ ಅಥವಾ ಸಂಸ್ಥೆಗಳು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದು. RBI ನಿಗದಿಪಡಿಸಿರುವ 19 ಕಛೇರಿಗಳ ಇಲ್ಲವೆಂದರೆ 2,000 ರೂ. ನೋಟುಗಳನ್ನು ಪೋಸ್ಟ್ ಮೂಲಕವು ಕಳುಹಿಸಬಹುದು ಎಂದು ಹೇಳಿದೆ.