newsics.com
ತಿರುವನಂತಪುರಂ: ಸ್ಥಳೀಯ ಸಂಸ್ಥೆಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮರ ಬಿದ್ದು ಸಾವನ್ನಪ್ಪಿದ್ದಾರೆ.
ಕೇರಳದ ತಿರುವನಂತಪುರಂ ಜಿಲ್ಲೆಯ ಕರೋಡೆ ಪಂಚಾಯತ್‌ನ ಪುತಿಯ ಉಚಕ್ಕಡ ವಾರ್ಡ್‌ನಲ್ಲಿ ಇಂದು(ನ.11) ಬೆಳಗ್ಗೆ ಈ ಘಟನೆ ನಡೆದಿದೆ.
ವಲಿಯಾವಿಲಾದ ಬೆತೆಲ್ ನಿವಾಸ್ ನಿವಾಸಿ ಬಿನು ಅವರ ಪತ್ನಿ ಗಿರಿಜಾ ಕುಮಾರಿ(35) ಮೃತಪಟ್ಟ ಅಭ್ಯರ್ಥಿ. ಗಿರಿಜಾ ಕುಮಾರಿ ಮಾಜಿ ಪಂಚಾಯತ್ ಸದಸ್ಯರಾಗಿದ್ದು, ಕರೋಡೆ ಪಂಚಾಯತ್‌ನ ಸಿಡಿಎಸ್ ಅಧ್ಯಕ್ಷರಾಗಿದ್ದರು.
ಗಿರಿಜಾ ಅವರು ಹತ್ತಿರದ ಪುಲ್ಲುವೆಟ್ಟಿ ಮೀನುಗಾರರ ಕಾಲೋನಿಯಲ್ಲಿ ಮತಯಾಚಿಸಿ ಪತಿ ಜತೆ ಬೈಕ್’ನಲ್ಲಿ ಹಿಂತಿರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಪುಲ್ಲುವೆಟ್ಟಿ ಬಳಿ ಕೆಲ ಕಾರ್ಮಿಕರು ಮರವನ್ನು ಕತ್ತರಿಸುತ್ತಿದ್ದ ವೇಳೆ ಮರದ ಒಂದು ಭಾಗ ಗಿರಿಜಾ ಅವರ ಮೇಲೆ ಬಿದ್ದಿದೆ. ಕತ್ತರಿಸುತ್ತಿದ್ದ ಮರದ ಭಾಗವನ್ನು ಹಗ್ಗದಿಂದ ಕಟ್ಟಿ ಹಿಡಿದಿದ್ದರೂ ನಿಯಂತ್ರಣಕ್ಕೆ ಬಾರದೇ ಗಿರಿಜಾಕುಮಾರಿ ಅವರ ಮೇಲೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರಿಜಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಜಿಯೂರ್ ಪೊಲೀಸರು ತಿಳಿಸಿದ್ದಾರೆ.
ಮಹಾಂತ ನೃತ್ಯ ಗೋಪಾಲ್ ದಾಸ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ
ಅಯೋಧ್ಯೆ ದೀಪೋತ್ಸವ : ಒಂದು ದಿನ ಮಾತ್ರ ಪ್ರದರ್ಶನ
ಸ್ಪುಟ್ನಿಕ್ -ವಿ ಲಸಿಕೆ ಶೇ.92ರಷ್ಟು ಯಶಸ್ವಿ- ರಷ್ಯಾ ಸಂಸ್ಥೆ