newsics.com
ಚೆನ್ಬೈ: ರೆಸ್ಟೋರೆಂಟ್ನಲ್ಲಿ ಪರೋಟಾ ತಿಂದು ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟಿಯಲ್ಲಿ ನಡೆದಿದೆ.
ಕರಪಗಮ್ಮ (33) ಹಾಗೂ ಮಗಳು ದರ್ಶಿನಿ (7) ಮೃತಪಟ್ಟ ತಾಯಿ- ಮಗಳು. ಮಂಗಳವಾರ ರಾತ್ರಿ ಕೋವಿಲ್ಪಟ್ಟಿಯ ರೆಸ್ಟೋರೆಂಟ್ನಲ್ಲಿ ಪರೋಟಾ ತಿಂದಿದ್ದಾರೆ. ನಂತರ ಹತ್ತಿರದ ಅಂಗಡಿಗೆ ಹೋಗಿ ತಂಪು ಪಾನೀಯ ಸೇವಿಸಿ ಮನೆಗೆ ಮರಳಿದ್ದರು. ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ತಾಯಿ ಮತ್ತು ಮಗಳು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಾರೆ. ಚಿಕಿತ್ಸೆಗಾಗಿ ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ತಿರುನೆಲ್ವೇಲಿ ಪಾಳ್ಯಂ ಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ತಾಯಿ ಮಗಳು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.