ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ತನಿಖೆ ಆರಂಭಿಸಿವೆ.
ಎರಡೂ ತನಿಖಾ ಸಂಸ್ಥೆಗಳು ಸುಶಾಂತ್ ಸ್ನೇಹಿತೆ, ಲಿವ್ ಇನ್ ಪಾರ್ಟನರ್ ರಿಯಾ ಚಕ್ರವರ್ತಿಗೆ ಬಲೆ ಬೀಸಿದ್ದು, ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಿವೆ. ಇಡಿ ಆ.7ರಂದು ವಿಚಾರಣೆಗೆ ಕರೆದಿದ್ದು, ಸಿಬಿಐ ಆ.8 ರಂದು ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಈಗಾಗಲೇ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿವೆ.
ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಅವರು ಬಿಹಾರ ಪೊಲೀಸರ ಬಳಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಈ ಮಾಹಿತಿಯನ್ನು ಪಡೆದುಕೊಂಡಿರುವ ಸಿಬಿಐ ತಂಡವು, ರಿಯಾ ಚಕ್ರವರ್ತಿ, ಸೌಮಿಕ್ ಚಕ್ರವರ್ತಿ, ಸ್ಯಾಮುಯಲ್ ಮಿರಾಂಡಾ, ಶ್ರುತಿ ಮೋದಿ, ಇಂದ್ರಜೀತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ನಮ್ಮ ಅಧಿಕಾರಿಯನ್ನು ಬಿಡದಿದ್ದರೆ ತಕ್ಕ ಶಾಸ್ತಿ- ‘ಮಹಾ’ ಪೊಲೀಸರಿಗೆ ಬಿಹಾರ್ ಡಿಜಿ ಎಚ್ಚರಿಕೆ
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಸಿಂಗ್ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಹಾರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರದ ನಡುವೆ ತನಿಖೆ ಪೈಪೋಟಿಯೂ ನಡೆದಿದೆ. ಕೇಂದ್ರ ಸರ್ಕಾರ ಈಗ ಪ್ರಕರಣವನ್ನು ಸಿಬಿಐಗೆ ವಹಿಸಿದೆ.