NEWSICS.COM
ನವದೆಹಲಿ: ಡಿ. 29 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರದೊಂದಿಗೆ ಸಭೆ ನಡೆಸಲು ರೈತ ಸಂಘಗಳು ಸಮ್ಮತಿಸಿವೆ. ಆದರೆ, ಸಭೆ ರೈತ ಒಕ್ಕೂಟಗಳು ನಿರ್ಧರಿಸಿದ ಕಾರ್ಯಸೂಚಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ನಾಲ್ಕು ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ಎಂಎಸ್ಪಿ ಮೇಲಿನ ಪ್ರತ್ಯೇಕ ಕಾನೂನು ಕೂಡ ಸೇರಿದೆ. ಇತರ ಎರಡು ಬೇಡಿಕೆಗಳು ವಿದ್ಯುತ್ ಕಾನೂನಿಗೆ ಸಂಬಂಧಿಸಿವೆ ಮತ್ತು ಭತ್ತದ ಕಡ್ಡಿ ಸುಡುವುದಕ್ಕೆ ಸಂಬಂಧಿಸಿದಿವೆ ಎನ್ನಲಾಗಿದೆ.
ರೈತ ಸಂಘಗಳು ಸಚಿವರೊಂದಿಗೆ ನಡೆಸುವ ಆರನೇ ಸಭೆ ಇದಾಗಿದೆ.