newsics.com
ನವದೆಹಲಿ: ಭಾರತದ ಕೊವಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ವಾರ ನಿರ್ಧರಿಸಲಿದೆ.
“ಡಬ್ಲ್ಯುಎಚ್ಒ ಮತ್ತು ಸ್ವತಂತ್ರ ತಜ್ಞರ ಗುಂಪು ಮುಂದಿನ ವಾರ ಸಭೆ ಸೇರಲಿದ್ದು, ಕೊವಾಕ್ಸಿನ್ ಲಸಿಕೆಯ ಮೌಲ್ಯಮಾಪನ ಕೈಗೊಂಡು, ಕೊವಾಕ್ಸಿನ್ ಅನ್ನು ತುರ್ತು ಬಳಕೆಯ ಪಟ್ಟಿಗೆ ಸೇರಸಬಹುದೇ ಎಂಬ ಕುರಿತು ಅಂತಿಮ ನಿರ್ಧಾರಕ್ಕೆ ಬರಲಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮೂಲಕ ಹೇಳಿದೆ.
“ಭಾರತ್ ಬಯೋಟೆಕ್ ಡಬ್ಲ್ಯುಎಚ್ಒಗೆ ಡೇಟಾವನ್ನು ಸಲ್ಲಿಸಿದೆ ಮತ್ತು ಡಬ್ಲ್ಯುಎಚ್ಒ ಕೋರಿಕೆಯ ಮೇರೆಗೆ ಸೆಪ್ಟೆಂಬರ್ 27ರಂದು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.
“ಡಬ್ಲ್ಯುಎಚ್ಒ ತಜ್ಞರು ಈ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಮುಂದಿನ ವಾರ ಡಬ್ಲ್ಯುಎಚ್ಒ ಮೌಲ್ಯಮಾಪನವನ್ನು ಅಂತಿಮಗೊಳಿಸಲಿದೆ” ಎಂದು ಟ್ವೀಟ್ ಮಾಡಿದೆ.