newsics.com
ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ವೈದ್ಯರು ನಿರ್ಧರಿಸಿದ್ದಾರೆ.
ಹೀಗಾಗಿ ಅವರನ್ನು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಿಂದ ಮಾಕ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮನೀಷ್ ಸಿಸೋಡಿಯಾ ಅವರು ಕೊರೋನಾ ಹಾಗೂ ಡೆಂಘೆಯಿಂದ ಬಳಲುತ್ತಿದ್ದಾರೆ.
ಅವರ ರಕ್ತದ ಪ್ಲೇಟ್ಲೆಟ್ಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಸೋಂಕು ಮತ್ತು ಡೆಂಘೆ ಜ್ವರ ಎರಡೂ ಒಟ್ಟಿಗೆ ಇರುವ ಪ್ರಕರಣ ಅಪರೂಪ ಎನ್ನಲಾಗಿದೆ.
ಸೆ.14ರಂದು ಮನೀಶ್ ಸಿಸೋಡಿಯಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಐಸೋಲೇಶನ್ನಲ್ಲಿದ್ದ ಅವರು ಜ್ವರ ಹಾಗೂ ಉಸಿರಾಟದ ತೊಂದರೆ ಹೆಚ್ಚಾಗಿ ಸೆ.23ರಂದು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ರಕ್ತದ ಪ್ಲೇಟ್ ಲೆಟ್ಗಳ ಸಂಖ್ಯೆ ಮತ್ತು ಆಕ್ಸಿಜನ್ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಸಾಕೇತ್ ಬಳಿಯ ಆಸ್ಪತ್ರೆ ಖಾಸಗಿ ಮ್ಯಾಕ್ಸ್’ಗೆ ದಾಖಲಿಸಲಾಗಿದೆ.
ದೆಹಲಿ ಡಿಸಿಎಂ ಪ್ಲೇಟ್’ಲೆಟ್ ಇಳಿಮುಖ, ಪ್ಲಾಸ್ಮಾ ಚಿಕಿತ್ಸೆಗೆ ನಿರ್ಧಾರ
Follow Us