ಮುಂಬೈ: ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ,ಎನ್ ಸಿ ಬಿ ಮುಂದೆ ಹಾಜರಾಗಲು ನಟಿ ದೀಪಿಕಾ ಪಡುಕೋಣೆ ಮುಂಬೈಗೆ ಹಿಂತಿರುಗಿದ್ದಾರೆ. ಗೋವಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ದೀಪಿಕಾ, ವಿಚಾರಣೆಗೆ ಹಾಜರಾಗಲು ಅದನ್ನು ಸ್ಥಗಿತಗೊಳಿಸಿ ಮುಂಬೈಗೆ ಹಿಂತಿರುಗಿದ್ದಾರೆ.
ಇಂದು ತಮ್ಮ ವಕೀಲರ ಜತೆ ಅವರು ಚರ್ಚೆ ನಡೆಸಲಿದ್ದಾರೆ. ನಾಳೆ ಎನ್ ಸಿ ಬಿ ಮುಂದೆ ವಿಚಾರಣೆಗೆ ಹಾಜರಾಗಲು ದೀಪಿಕಾ ನಿರ್ಧರಿಸಿದ್ದಾರೆ.
ಇಂದು ಎನ್ ಸಿ ಬಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ವಿಚಾರಣೆ ನಡೆಸಲಿದೆ. ಎನ್ ಸಿ ಬಿ ವಿಚಾರಣೆಗೆ ಹಾಜರಾಗಲು ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಮುಂಬೈ ತಲುಪಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ತೆಲುಗು ಚಿತ್ರರಂಗದಲ್ಲಿ ಜನಪ್ರಿಯನಟಿಯಾಗಿದ್ದಾರೆ