ನವದೆಹಲಿ: ಸ್ವಿಟ್ಜರ್ ಲ್ಯಾಂಡ್ ನ ದಾವೋಸ್ ನಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಗಣ್ಯರನ್ನು “ಅಸಾಧಾರಣ ಸಾಂಸ್ಕೃತಿಕ ನಾಯಕ”ರೆಂದು ಗುರುತಿಸಿ ಗೌರವಿಸಲಾಗುತ್ತಿದೆ.
ತಮ್ಮ ಅಸಾಧಾರಣ ಪ್ರಯತ್ನಗಳ ಮೂಲಕ ಜಗತ್ತಿಗೆ ನೀಡಿರುವ ಕೊಡುಗೆಗಾಗಿ ನಟಿ ದೀಪಿಕಾ ಪಡುಕೋಣೆ ಹಾಗೂ ಇತರ ನಾಲ್ವರನ್ನು ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಗುವುದು. ಮಾನಸಿಕ ಅಸ್ವಸ್ಥತೆಯ ಬಗ್ಗೆ ಹರಡಿರುವ ಕಳಂಕ ನಿವಾರಣೆಗೆ ಕೊಡುಗೆ ಹಾಗೂ ಆರೋಗ್ಯ ಕುರಿತ ಅಧಿವೇಶನದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಭಾಷಣಕಾರರ ಪೈಕಿ ಒಬ್ಬರಾಗಿದ್ದಾರೆ.
ದಾವೋಸ್ ನಲ್ಲಿ ದೀಪಿಕಾ ಪಡುಕೋಣೆಗೆ ಸನ್ಮಾನ
Follow Us