ನವದೆಹಲಿ: ಮಕ್ಕಳಿಂದ ಬೆತ್ತಲೆ ದೇಹದ ಮೇಲೆ ಪೇಂಟ್ ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ರೆಜನಾ ಫಾತಿಮಾಗೆ ಸಧ್ಯ ಜೈಲೈ ಗತಿಯಾಗಿದೆ. ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಬಾಡಿ ಆಂಡ್ ಪಾಲಿಟಿಕ್ಸ್ ಎಂಬ ಕಾನ್ಸೆಪ್ಟ್ ಅಡಿಯಲ್ಲಿ ತಮ್ಮ ಬೆತ್ತಲೆ ಮೈಮೇಲೆ ಮಕ್ಕಳ ಬಳಿಚಿತ್ರ ಬಿಡಿಸುವಂತೆ ಹೇಳಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿತ್ತು.ಈ ಹಿನ್ನೆಲೆಯಲ್ಲಿ ರೆಹನಾ ಫಾತಿಮಾ ವಿರುದ್ಧ ಕೇರಳ ಪೊಲೀಸರು ಪೋಸ್ಕೋ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಜೈಲಿಗಟ್ಟಿದ್ದರು.
ಇದನ್ನು ಪ್ರಶ್ನಿಸಿ ಹಾಗೂ ತಮಗೆ ಜಾಮೀನು ನೀಡಬೇಕೆಂದು ಆಗ್ರಹಿಸಿ ಫಾತಿಮಾ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಬೇಲ್ ನೀಡಲು ನಿರಾಕರಿಸಿತ್ತು.
ಪಟ್ಟು ಬಿಡದ ರೆಹನಾ ಫಾತಿಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಜಾಮೀನು ನೀಡಲು ನ್ಯಾಯಮೂರ್ತಿ ಅರುಣ ಮಿಶ್ರಾ ನೇತ್ರತ್ವದ ನ್ಯಾಯ ಪೀಠ ನಿರಾಕರಿಸಿದೆ. ಅಷ್ಟೇ ಅಲ್ಲ ಫಾತಿನಾ ವರ್ತನೆ ವಿರುದ್ದ ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ನೀವು ಮಾಡಿದ ವರ್ತನೆಯಿಂದ ಇತರರಿಗೆ ಕೆಟ್ಟ ಸಂದೇಶ ಹೋದಂತಾಗುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ.
ರೆಹನಾ ಫಾತಿಮಾಗೆ ಸುಪ್ರೀಂನಲ್ಲೂ ಸೋಲು..! ಸಿಗಲಿಲ್ಲ ಬೇಲು
Follow Us