ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಗಡಿಯಲ್ಲಿ ನೆಲೆಸಿರುವ ಪರಿಸ್ಥಿತಿ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ. ಲಡಾಕ್ ನ ಪೂರ್ವ ಗಡಿಯಲ್ಲಿ ನ ಸದ್ಯದ ಪರಿಸ್ಥಿತಿ ಮತ್ತು ಚೀನಾದ ಉಪಟಳ ಕುರಿತಂತೆ ರಾಜನಾಥ್ ಸಿಂಗ್ ಸಮಗ್ರ ಮಾಹಿತಿ ನೀಡಲಿದ್ದಾರೆ.
ಮಾಸ್ಕೊದಲ್ಲಿ ಉಭಯ ದೇಶಗಳ ರಕ್ಷಣಾ ಸಚಿವರ ಮಧ್ಯೆ ನಡೆದ ಮಾತುಕತೆ ಮತ್ತು ಅದರಲ್ಲಿ ಮೂಡಿ ಬಂದ ಒಮ್ಮತದ ಅಂಶಗಳ ಕುರಿತು ಕೂಡ ರಾಜನಾಥ್ ಸಿಂಗ್ ಸದನಕ್ಕೆ ವಿವರಿಸಲಿದ್ದಾರೆ. ಕೇಂದ್ರ ಸರ್ಕಾರ, ಗಡಿಯಲ್ಲಿನ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದರು.
ಈ ಮಧ್ಯೆ ಮಾತುಕತೆಯಲ್ಲಿ ಸೇನಾ ಹಿಂತೆಗೆತಕ್ಕೆ ಒಪ್ಪಿಗೆ ಸೂಚಿಸಿದ್ದರೂ ಚೀನಾ ಇದುವರೆಗೆ ಆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ವರದಿಯಾಗಿದೆ.