ನವದೆಹಲಿ: ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಗೌರವಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿಯಲ್ಲಿರುವ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ (ಐಡಿಎಸ್‌ಎ) ಸಂಸ್ಥೆಗೆ ಪರಿಕ್ಕರ್ ಅವರ ಹೆಸರಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರಕ್ಷಣಾ ಸಚಿವರಾಗಿದ್ದಾಗ ಪರಿಕ್ಕರ್ ತಂದ ಸುಧಾರಣೆಗಳನ್ನು ನೆನಪಿನಲ್ಲಿಡಲು ಐಡಿಎಸ್‌ಎಗೆ ಮರು ನಾಮಕರಣ ಮಾಡಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ಮಂಗಳವಾರ ಅಧಿಕೃತ ಹೇಳಿಕೆ ನೀಡಿದೆ.
ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆ ಜಾರಿಗೆ ತರಲು ಪರಿಕ್ಕರ್ ಶ್ರಮಿಸಿದ್ದರು. ಪಠಾಣ್ ಕೋಟ್ ಮತ್ತು ಉರಿ ಸೇನಾ ದಾಳಿಗಳು ನಡೆದಾಗ ಅವರ ಕಾರ್ಯನಿರ್ವಹಣೆ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು.
ರಕ್ಷಣಾ ಅಧ್ಯಯನ, ವಿಶ್ಲೇಷಣಾ ಸಂಸ್ಥೆಗೆ ಪರಿಕ್ಕರ್ ಹೆಸರು
Follow Us