newsics.com
ನವದೆಹಲಿ: ಸಿಎಎ ನೆಪದಲ್ಲಿ ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಮತ್ತಿತರರು ಕಾರಣ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪೂರಕ ಆರೋಪ ಪಟ್ಟಿಯಲ್ಲಿ ಇವರ ಹೆಸರು ಉಲ್ಲೇಖಿಸಲಾಗಿದೆ.
ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್, ಆರ್ಥಿಕ ತಜ್ಞೆ ಜಯತಿ ಘೋಷ್, ದೆಹಲಿ ವಿ.ವಿ.ಯ ಪ್ರಾಧ್ಯಾಪಕ ಹಾಗೂ ಸಾಮಾಜಿಕ ಹೋರಾಟಗಾರ ಅಪೂರ್ವಾನಂದ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕ ರಾಹುಲ್ ರಾಯ್ ಅವರನ್ನು ಪಿತೂರಿಗಾರರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಸಿಎಎ ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ಸಮುದಾಯದಲ್ಲಿ ಅಸಮಾಧಾನ ಹರಡಿದ ಹಾಗೂ ಕೇಂದ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರತಿಭಟನೆ ಆಯೋಜಿಸಿ ಗಲಭೆಗೆ ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪವನ್ನು ಈ ನಾಯಕರ ಮೇಲೆ ಹೊರಿಸಲಾಗಿದೆ.
ಫೆಬ್ರವರಿ 23 ಹಾಗೂ 26ರ ನಡುವೆ ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ನಡೆದ ಗಲಭೆಯಲ್ಲಿ 53 ಜನರು ಸಾವನ್ನಪ್ಪಿ 581 ಜನರು ಗಾಯಗೊಂಡಿದ್ದರು.
ದೆಹಲಿ ಸಿಎಎ ಗಲಭೆ; ಪೂರಕ ಆರೋಪ ಪಟ್ಟಿಯಲ್ಲಿ ಯೆಚೂರಿ, ಯಾದವ್ ಹೆಸರು
Follow Us