ನವದೆಹಲಿ: ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ.
ಎಬಿಪಿ ನ್ಯೂಸ್ ಹಾಗೂ ಸಿ-ವೋಟರ್ಸ್ ನಡೆಸಿದ ದೇಶ್ ಕಾ ಮೂಡ್ ಸಮೀಕ್ಷೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆದ್ದಿದ್ದಾರೆ. ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರದ ಬಗ್ಗೆ ಶೇ.52 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರು ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಪರ ಶೇ.59 ಮಂದಿ ಮತ ಹಾಕಿದ್ದಾರೆ.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ದೆಹಲಿಯಲ್ಲಿ ಜ.14ರಿಂದ ಚುನಾವಣಾ ಅಧಿಸೂಚನೆ ಜಾರಿಯಾಗಿದ್ದು, ಫೆ.8ರಂದು ಮತದಾನ ನಡೆಯಲಿದೆ. ಫೆ.11ರಂದು ಫಲಿತಾಂಶ ಹೊರಬರಲಿದೆ.
ದೆಹಲಿ ಚುನಾವಣೆ; ಆಮ್ ಆದ್ಮಿಯತ್ತ ಮತದಾರನ ಒಲವು
Follow Us