NEWSICS.COM
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ಉದ್ಯೋಗ ನೀಡುವುದಾಗಿ ನಕಲಿ ಖಾತೆಯನ್ನು ತೆಗೆದು 27 ಸಾವಿರ ಜನರನ್ನು ವಂಚಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ದಂಧೆಯ ಗ್ಯಾಂಗ್’ನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಪತ್ತೆ ಮಾಡಿದೆ.
‘ಸ್ವಸ್ಥ ಅವಂ ಜನ ಕಲ್ಯಾಣ್ ಸಂಸ್ಥಾನ್’ ಹೆಸರಿನ ನಕಲಿ ವೆಬ್ಸೈಟ್ ಸುಮಾರು 13 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಹೀಗೆ 27 ಸಾವಿರ ಜನರನ್ನು ವಂಚಿಸಿತ್ತು ಎನ್ನಲಾಗಿದೆ.
ಇದರಲ್ಲಿ ಭಾಗಿಯಾಗಿದ್ದ 5 ಜನರನ್ನು ಬಂಧಿಸಿ, 3 ಲ್ಯಾಪ್ ಟಾಪ್ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 49ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.