newsics.com
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತ ಪಡೆದಿದೆ. 250 ವಾರ್ಡ್ ಗಳ ಪೈಕಿ ಆಪ್ 131 ಸ್ಥಾನಗಳನ್ನು ಪಡೆಯುವತ್ತ ಹೆಜ್ಜೆ ಇರಿಸಿದೆ.
ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಇದ್ದ ಬಿಜೆಪಿ ನಿಕಟ ಪೈಪೋಟಿ ನೀಡಿದ್ದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ದೆಹಲಿಯಲ್ಲಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆ ಎರಡರಲ್ಲಿ ಕೂಡ ಅಧಿಕಾರಕ್ಕೆ ಬರುವುದರಲ್ಲಿ ಆಮ್ ಆದ್ಮಿ ಪಕ್ಷ ಇದೀಗ ಯಶಸ್ವಿಯಾಗಿದೆ.
ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಇದೀಗ ದೆಹಲಿಯಲ್ಲಿ ಕೂಡ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಿದೆ