Newsics.Com
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಮೊಘಲ್ ಗಾರ್ಡನ್ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಅಮೃತ ಉದ್ಯಾನವೆಂದು ಹೊಸದಾಗಿ ನಾಮಕರಣ ಮಾಡಿದೆ.
ಆಜಾದಿ ಕಾ ಅಮೃತ್ ಮಹೋತ್ಸ ಅಂಗವಾಗಿ ಹೆಸರು ಬದಲಾವಣೆ ಮಾಡಲಾಗಿದೆ. ಗಾರ್ಡನ್ ಹೆಸರು ಬದಲಾವಣೆ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ ಎಂದು ರಾಷ್ಟ್ರಪತಿಗಳ ಮಾಧ್ಯಮ ಉಪ ಕಾರ್ಯದರ್ಶಿ ನವಿಕಾ ಗುಪ್ತಾ ಶನಿವಾರ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ಭವನದ ಆವರಣದಲ್ಲಿರುವ ನವೀಕೃತ ಗಾರ್ಡನ್ ಅನ್ನು ರಾಷ್ಟ್ರ ಪತಿಗಳು ಭಾನುವಾರ ಉದ್ಘಾಟಿಸಲಿದ್ದು ಜನವರಿ 31ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ದೊರೆಯಲಿದೆ. ಮಾರ್ಚ್ 31ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿದೆ.