ನವದೆಹಲಿ: ತುರ್ತು ಪರಿಸ್ಥಿತಿಯ ವೇಳೆ ಆಂತರಿಕ ಭದ್ರತಾ ಕಾಯ್ದೆ (ಮಿಸಾ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ರಾಜಕೀಯ ಕೈದಿಗಳಿಗೆ ಆಯುಷ್ಮಾನ್ ಭಾರತ್ನಂತಹ ಆರೋಗ್ಯ ಯೋಜನೆಗಳನ್ನು ವಿಸ್ತರಿಸಬೇಕೆಂಬ ಒತ್ತಾಯ ರಾಜ್ಯಸಭೆಯಲ್ಲಿ ಕೇಳಿಬಂದಿತು.
ಬಿಜೆಪಿ ಸದಸ್ಯ ಕೈಲಾಶ್ ಸೋನಿ, ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಕಾರಣರಾದ 1,20,000 ಮಿಸಾ ಕೈದಿಗಳಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಇವರೆಲ್ಲರೂ 20 ತಿಂಗಳು ಜೈಲುಗಳಲ್ಲಿ ಕಳೆದಿದ್ದಾರೆ. ಅವರಿಗೆ ಪಿಂಚಣಿ ಹಾಗೂ ಆಯುಷ್ಮಾನ್ ಭಾರತ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.