ಪಣಜಿ: ಕೇರಳದಲ್ಲಿ ಮೂರು ಕೊರೋನಾ ವೈರಾಣು ಸೋಂಕು ಪ್ರಕರಣ ದೃಢಪಟ್ಟಿರುವುದೂ ಅದಕ್ಕೆ ನೇರ ರೈಲು ಸಂಪರ್ಕ ಹೊಂದಿರುವ ಗೋವಾ ಜನರಿಗೆ ಆತಂಕ ಮೂಡಿಸಿದೆ.
ಪ್ರವಾಸಿಗರಿಗೆ ಸುತ್ತಮುತ್ತಲಿನ ಸುಂದರ ದೃಶ್ಯವನ್ನು ಉಣಬಡಿಸುತ್ತಾ ಗೋವಾಕ್ಕೆ ಕರೆದೊಯ್ಯುವ ಕೊಂಕಣ ರೈಲು ನೇರವಾಗಿ ಕೇರಳಕ್ಕೆ ಸಂಪರ್ಕಿಸುವುದರಿಂದ, ರೈಲ್ವೆ ನಿಲ್ದಾಣದಲ್ಲೂ ಪ್ರಯಾಣಿಕರನ್ನು ಥರ್ಮಲ್ ತಪಾಸಣೆಗೊಳಪಡಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಗೋವಾ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವ್ ಪ್ರವಾಸಿ ತಾಣವಾದ ಗೋವಾಕ್ಕೆ ಮಾರಣಾಂತಿಕ ಸೋಂಕು ಪ್ರವೇಶಸಿದಂತೆ ತಡೆಯಲು ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.