newsics.com
ನವದೆಹಲಿ: ದೇಶದಲ್ಲಿ ಕೊರೊನಾ ದ BA.4 ಮತ್ತು BA.5 ಉಪತಳಿಗಳ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಸರಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ INSACOG ದೃಢಪಡಿಸಿದೆ.
ಇವೆರಡೂ ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರದ ತಳಿಗಳಾಗಿವೆ. ತಮಿಳುನಾಡಿನಲ್ಲಿ 19 ವರ್ಷದ ಮಹಿಳೆಯಲ್ಲಿ ಮತ್ತು ತೆಲಂಗಾಣ ದಲ್ಲಿ 80 ವರ್ಷದ ವ್ಯಕ್ತಿಯೊಬ್ಬರಲ್ಲಿ ಪ್ರಕರಣಗಳು ಪತ್ತೆಯಾಗಿವೆ.