ನವದೆಹಲಿ: ಫ್ರಾನ್ಸ್ ಹಾಗೂ ಬ್ರಿಟನ್‌ಗಳನ್ನು ಹಿಂದಿಕ್ಕುವ ಮೂಲಕ ಭಾರತ 2019ನೇ ಸಾಲಿನಲ್ಲಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಅಮೆರಿಕದ ಚಿಂತನ ಚಿಲುಮೆ ‘ದಿ ವರ್ಲ್ಡ್ ಪಾಪ್ಯುಲೇಷನ್ ರಿವ್ಯು’ ತನ್ನ ವರದಿಯಲ್ಲಿ ತಿಳಿಸಿದೆ. ಭಾರತವು ತನ್ನ ಹಿಂದಿನ ಸ್ವಯಂಪೂರ್ಣ ನೀತಿಗಳಿಂದ ಮುಕ್ತ ಮಾರುಕಟ್ಟೆ ಆರ್ಥಿಕತೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದಿರುವ ವರದಿ, ಭಾರತದ ಜಿಡಿಪಿಯು 2.94 ಲ.ಕೋ.ಡಾ. ಗಾತ್ರದ್ದಾಗಿವೆ. ಭಾರತದ ವಾಸ್ತವ ಜಿಡಿಪಿ ಪ್ರಗತಿ ದರವು ಸತತ ಮೂರನೇ ವರ್ಷಕ್ಕೆ ಶೇ.7.5ರಿಂದ ಶೇ.5ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ವಿಶ್ವ ಆರ್ಥಿಕತೆ ಅಭಿವೃದ್ಧಿ; ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿದ ಭಾರತ
Follow Us