newsics.com
ಭಯಭೀತವಾಗಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದಕ್ಕೆ ನಿರ್ಬಂಧಿಸಿದ್ದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದೆಹಲಿಯ ರಾಂಚಿ ವಿಮಾನ ನಿಲ್ದಾಣದಲ್ಲಿ ಮೇ 7ರಂದು ಈ ಘಟನೆ ನಡೆದಿತ್ತು.
ಈ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ ಮಗುವು ಗಾಬರಿಗೊಂಡಿದ್ದರಿಂದ ವಿಮಾನ ಹತ್ತಲು ಸಾಧ್ಯವಾಗಿರಲಿಲ್ಲ. ಮಗು ಶಾಂತವಾಗಬಹುದು ಎಂದು ನಾವು ಕೊನೆ ಕ್ಷಣದವರೆಗೂ ಕಾದಿದ್ದೆವು ಎಂದು ಹೇಳಿದೆ.
ಈ ಪ್ರಕರಣ ಸಂಬಂಧ ತ್ರಿಸದಸ್ಯ ಪೀಠ ರಚಿಸಿ ತನಿಖೆ ನಡೆಸಿದ್ದ ಡಿಜಿಸಿಎ ವಿಶೇಷ ಚೇತನ ಮಗುವನ್ನು ನಿಭಾಯಿಸಲು ಸಾಧ್ಯವಾಗದೇ ಇರುವುದಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆ ಕಾರಣ ಎಂದು ಹೇಳಿತ್ತು.