Friday, January 21, 2022

ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!

Follow Us

newsics.com
ಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳು ಪತ್ತೆಯಾಗಿದ್ದು, ಇದನ್ನು ಪತ್ತೆಹಚ್ಚಿದ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.
ಜರೂರ್​ಪುರದ ಗಣಿಯಿಂದ ದಿಲೀಪ್​ ಮಿಸ್ತ್ರಿ 7.44 ಕ್ಯಾರೆಟ್​ ವಜ್ರ ಹೊರತೆಗೆದ್ರೆ, ಲಖನ್​ ಯಾದವ್​ ಕೃಷ್ಣ ಕಲ್ಯಾಣ್​ಪುರ ಪ್ರದೇಶದಲ್ಲಿ 14.98 ಕ್ಯಾರಟ್​ ವಜ್ರ ತೆಗೆದಿದ್ದಾರೆ ಎಂದು ವಜ್ರ ನಿರೀಕ್ಷಕ ಅನುಪಮ್​ ಸಿಂಗ್​ ಮಾಹಿತಿ ನೀಡಿದ್ದಾರೆ.
ಈ ವಜ್ರಗಳನ್ನು ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ ಕಾರ್ಮಿಕರ ಪಾಲಾಗಲಿದೆ. 7.44 ಕ್ಯಾರೆಟ್​ ವಜ್ರ 30 ಲಕ್ಷ ರೂಪಾಯಿ ಬೆಲೆ ಬಾಳಿದರೆ, ಇನ್ನೊಂದು ವಜ್ರಕ್ಕೆ ಅದರ ದುಪ್ಪಟ್ಟು ಹಣ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬುಂದೇಲ್’ಕಂಡ್’ನ ಹಿಂದುಳಿದ ಪ್ರದೇಶಗಳಲ್ಲೊಂದಾದ ಪನ್ನಾ ವಜ್ರ ಗಣಿಗಾರಿಕೆಗೆ ಹೆಸರಾಗಿದೆ.

ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು

ತೆಂಗಿನಕಾಯಿ ನೀಡಿ ಬೋಧನಾ ಶುಲ್ಕ ಪಾವತಿಸಿ

ಬೈಕ್’ಗಳ ಡಿಕ್ಕಿ; ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು ಮಣಿಪಾಲ್ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ

2021ರ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರದ್ದು

ಮತ್ತಷ್ಟು ಸುದ್ದಿಗಳು

Latest News

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು....

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...

ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

newsics.com ನವದೆಹಲಿ: ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕ್‌ನ 35 ಯೂಟ್ಯೂಬ್‌ ಚಾನೆಲ್‌, ಎರಡು ಟ್ವಿಟ್ಟರ್‌ ಖಾತೆ, ಎರಡು ಇನ್‌ಸ್ಟಾಗ್ರಾಮ್‌ ಖಾತೆ, ಎರಡು ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಮಾಹಿತಿ ಮತ್ತು...
- Advertisement -
error: Content is protected !!