ನವದೆಹಲಿ: ತೈಲ ಸಂಸ್ಥೆಗಳ ದರ ಹೆಚ್ಚಳ ಪ್ರಕ್ರಿಯೆ ಮುಂದುವರಿದಿದೆ. ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ ದರ 13 ಪೈಸೆ ಹೆಚ್ಚಳವಾಗಿದೆ. ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ ಇದೀಗ 81 ರೂಪಾಯಿ 18 ಪೈಸೆ ಆಗಿದೆ.
ಇಂದು ಪೆಟ್ರೋಲ್ ದರದಲ್ಲಿ ಹೆಚ್ಚಳವಾಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಗೆ ಹೋಲಿಸಿದರೆ ಡೀಸೆಲ್ ದುಬಾರಿಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 80 ರೂಪಾಯಿ 43 ಪೈಸೆ. ಇದು ದೆಹಲಿಯಲ್ಲಿನ ಪೆಟ್ರೋಲ್ ದರ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಇಳಿಕೆಯಾಗುತ್ತಿದ್ದರೂ ದೇಶದಲ್ಲಿ ಮಾತ್ರ ಹೆಚ್ಚಳವಾಗುತ್ತಿದೆ. ಪ್ರತಿಪಕ್ಷಗಳ ವಿರೋಧ ನಿರ್ಲಕ್ಷಿಸಿ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದಿಂದ ರಾಜ್ಯ ಸರ್ಕಾರಗಳಿಗೂ ಹೆಚ್ಚಿನ ಆದಾಯ ಲಭಿಸುತ್ತಿದೆ