newsics.com
ಮುಂಬೈ: ತಮಿಳುನಾಡು ಮೂಲದ ಕಿರು ಚಿತ್ರ ನಿರ್ದೇಶಕಿ ಲೀನಾ ಇದೀಗ ಟ್ವಿಟರ್ ಖಾತೆಯಲ್ಲಿ ಮತ್ತೊಮ್ಮೆ ವಿವಾದಾಸ್ಪದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಶಿವ ಮತ್ತು ಪಾರ್ವತಿ ವೇಷ ಧರಿಸಿರುವ ಕಲಾವಿದರು ಧೂಮ ಪಾನ ಮಾಡುತ್ತಿರುವ ಚಿತ್ರ ಫೋಸ್ಟ್ ಮಾಡಿದ್ದಾರೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆ ಕಾಳಿ ಮಾತೆ ಕುರಿತ ಚಿತ್ರ ಪೋಸ್ಟ್ ಮಾಡಿದ್ದರು. ಲೀನಾ ಅವರ ಈ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಎಫ್ ಐ ಆರ್ ದಾಖಲಿಸಲಾಗಿತ್ತು.
ವಿರೋಧಕ್ಕೆ ಮಣಿದ ಟ್ವಿಟರ್ ಈ ಚಿತ್ರವನ್ನು ಖಾತೆಯಿಂದ ಡಿಲಿಟ್ ಮಾಡಿತ್ತು. ಇದೀಗ ಮತ್ತೊಮ್ಮೆ ವಿವಾದಾಸ್ಪದ ಚಿತ್ರ ಶೇರ್ ಮಾಡುವ ಮೂಲಕ ಲೀನಾ, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.