newsics.com
ನವದೆಹಲಿ: ಟೂಲ್ ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ದಿಶಾ ರವಿಗೆ ನ್ಯಾಯಾಲಯ ಜಾಮೀನು ನೀಡಿದೆ. ರೈತರ ಹೋರಾಟ ಸಂಬಂಧ ಟೂಲ್ ಕಿಟ್ ಹಗರಣದಲ್ಲಿ ದಿಶಾ ರವಿಯನ್ನು ಬಂಧಿಸಲಾಗಿತ್ತು.
ದೆಹಲಿ ವಿಶೇಷ ಪೊಲೀಸರ ತಂಡ ಬೆಂಗಳೂರಿನಲ್ಲಿ ದಿಶಾ ರವಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿತ್ತು. ಸೋಮವಾರ ನ್ಯಾಯಾಲಯ ಒಂದು ದಿನದ ಮಟ್ಟಿಗೆ ದಿಶಾ ರವಿಯನ್ನು ಪೊಲೀಸ್ ವಶಕ್ಕೆ ನೀಡಿತ್ತು
ಫೆಬ್ರವರಿ 13ರಿಂದ ದಿಶಾ ರವಿ ಜೈಲಿನಲ್ಲಿದ್ದಾರೆ.
ಇದೀಗ ದೆಹಲಿ ನ್ಯಾಯಾಲಯ ದಿಶಾ ರವಿಗೆ ಷರತ್ತು ಬದ್ದ ಜಾಮೀನು ನೀಡಿದೆ. ಒಂದು ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಆದೇಶ ನೀಡಿದೆ.