Thursday, June 17, 2021

ಸಚಿನ್ ಪೈಲಟ್ ನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾಂಗ್ರೆಸ್ ಚಿಂತನೆ

ಜೈಪುರ: ಕಾಂಗ್ರೆಸ್ ನಾಯಕತ್ವ ವಿರುದ್ದ ಬಂಡಾಯ ಸಾರಿರುವ ಸಚಿನ್ ಪೈಲಟ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಂಬಂಧ ಕಾಂಗ್ರೆಸ್ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಶಾಸಕಾಂಗ ಸಭೆಗೆ ಗೈರು ಹಾಜರಾಗಿರುವುದಕ್ಕೆ  ಸ್ಪಷ್ಟೀಕರಣ ನೀಡುವಂತೆ ಈಗಾಗಲೇ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎರಡು ದಿನಗಳಲ್ಲಿ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಮಧ್ಯೆ ಬಂಡಾಯ ಹತ್ತಿಕ್ಕುವ ಮೊದಲ ಯತ್ನವಾಗಿ ಸಚಿನ್ ಪೈಲಟ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಪ್ರಕ್ರಿಯೆಗೆ  ಕಾಂಗ್ರೆಸ್ ಚಾಲನೆ ನೀಡಿದೆ ಎಂದು ವರದಿಯಾಗಿದೆ.

ಈ ಮಧ್ಯೆ ತಾನು ಬಿಜೆಪಿ ಸೇರುತ್ತೇನೆ ಎಂಬ ವರದಿಗಳನ್ನು ಸಚಿನ್ ಪೈಲಟ್ ನಿರಾಕರಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಸಚಿನ್ ಪೈಲಟ್, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದೇನೆ. ಇದೀಗ ಯಾಕೆ ಬಿಜೆಪಿ ಸೇರಲಿ ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಸಚಿನ್ ಪೈಲಟ್ ಪ್ರಾದೇಶಿಕ ಪಕ್ಷ ರಚಿಸುವ ಸಾಧ್ಯತೆ ಹೆಚ್ಚಾಗಿದೆ

ಇನ್ನೊಂದೆಡೆ ಬಿಜೆಪಿಯ ಮಹತ್ವದ ಸಭೆ ಇಂದು ಜೈಪುರದಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು  ಜೈಪುರಕ್ಕೆ ಹಿಂತಿರುಗಿದ್ದು, ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಸಚಿನ್ ಪೈಲಟ್ ಅವರನ್ನು ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ ಮಾಡುವ ಪ್ರಸ್ತಾಪವನ್ನು ವಸುಂಧರಾ ರಾಜೇ ವಿರೋಧಿಸತ್ತಿದ್ದಾರೆ ಎಂದು ವರದಿಯಾಗಿದೆ

ಮತ್ತಷ್ಟು ಸುದ್ದಿಗಳು

Latest News

ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಪತ್ತೆ

newsics.com ಬೋಟ್ಸ್ವಾನ: ಜಗತ್ತಿನ‌ ಮೂರನೇ ಅತಿ ದೊಡ್ಡ ವಜ್ರ ಗ್ಯಾಬರೋನ್ ನಲ್ಲಿ ಪತ್ತೆಯಾಗಿದೆ. ಐದು ದಶಕಗಳಿಂದ ವಜ್ರದ ಗಣಿಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಡಿ ಬೀರ್ಸ್ ಕಂಪನಿಯ ವಿಭಾಗವಾದ...

ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ವಿಚಾರಣೆ

newsics.com ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಿಚಾರಣೆ ನ಼಼ಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಾಜಿ ಎನ್ ಕೌಂಟರ್...

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ ಟಿವಿ ಉತ್ಪನ್ನಗಳ ಬೆಲೆ ಹೆಚ್ಚಿಸಲು ಗಂಭೀರ...
- Advertisement -
error: Content is protected !!