Sunday, May 29, 2022

ಡಿಎಂಕೆ ಸಂಸದನ 89 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಆದೇಶ

Follow Us

newsics.com
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಡಿಎಂಕೆ ಸಂಸದ ಎಸ್.ಜಗತ್ ರಕ್ಷಕ್ ಹಾಗೂ ಅವರ ಕುಟುಂಬದ 89.19 ಕೋಟಿ ರೂಪಾಯಿ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ (ಇಡಿ) ಆದೇಶ ಹೊರಡಿಸಿದೆ.
ಜಗತ್ ರಕ್ಷಕನ್ ಹಾಗೂ ಅವರ ಕುಟುಂಬದವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಫೆಮಾ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಡಿ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿದೆ.
ಜಗತ್ ರಕ್ಷಕ್ ಹಾಗೂ ಅವರ ಮಗ ಸಂದೀಪ್ ಆನಂದ್ ಅವರು ಸಿಂಗಾಪೂರ ಮೂಲದ ಸಿಲ್ವರ್ ಪಾರ್ಕ್ ಇಂಟರ್ನ್ಯಾಷನಲ್ ಪ್ರೈ.ಲಿ.ಕಂಪನಿಯಿಂದ ಕ್ರಮವಾಗಿ 70 ಹಾಗೂ 20 ಲಕ್ಷ ಷೇರು ಪಡೆದಿದ್ದು, ಅದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ಪಡೆದಿಲ್ಲ. ಇದು ತನಿಖೆ ವೇಳೆ ಬಯಲಾಗಿದೆ ಎಂದು ಇಡಿ ವಿವರಣೆ ನೀಡಿದೆ.
ಹೀಗೆ ಅನಧಿಕೃತವಾಗಿ ಪಡೆದುಕೊಂಡ ಶೇರುಗಳನ್ನು ಸಂಸದ ಜಗತ್ ರಕ್ಷಕ್ ನ ಕುಟುಂಬದ ಸದಸ್ಯರಿಗೆ ವರ್ಗಾಯಿಸಿದ್ದಾರೆ. ಈಗ ತನಿಖೆ ಬಳಿಕ ಫೆಮಾ ಕಾಯ್ದೆಯ ಸೆಕ್ಷನ್ 37 ರ ಅಡಿ ಜಗತ್ ರಕ್ಷಕ್ ನ ಹಾಗೂ ಅವರ ಕುಟುಂಬದ ಸದಸ್ಯರ ಫ್ಲ್ಯಾಟ್, ಭೂಮಿ, ಮನೆ ಹಾಗೂ ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ವಿವರಣೆ ನೀಡಿದ್ದು ತನಿಖೆ ಮುಂದುವರೆಯಲಿದೆ.

ಮತ್ತಷ್ಟು ಸುದ್ದಿಗಳು

Latest News

ಪೋಲೀಸ್ ಠಾಣೆಗಳಲ್ಲಿ ಸಿಸಿಟಿವಿ ಆಡಿಯೋ ಕಡ್ಡಾಯ: ದೆಹಲಿ ಹೈಕೋರ್ಟ್

newsics.com ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ...

ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ

newsics.com ಚೆನ್ನೈ: ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅನಾವರಣಗೊಳಿಸಿದರು. ಈ ಮೊದಲೇ ಪ್ರತಿಮೆ ನಿರ್ಮಿಸಿದ್ದು, ಅದನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರತಿಮೆ...

ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ

newsics.com ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ ನೀಡಿದೆ. ಸುಖೇಶ್ ಚಂದ್ರಶೇಖರ್ ವಿರುಧ್ದದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಅವರಿಗೆ...
- Advertisement -
error: Content is protected !!