newsics.com
ತೆಲಂಗಾಣ: ದೇಶದಲ್ಲಿ ವಿವಿಧ ಸೌಲಭ್ಯಗಳ ಕೊರತೆಯಿಂದ ಜನ ಪರದಾಡುತ್ತಿದ್ದರೆ, ತೆಲಂಗಾಣದಲ್ಲಿ ಸೌಲಭ್ಯ ಕೊರತೆ ವಿರೋಧಿಸಿ ವೈದ್ಯರೇ ಪ್ರತಿಭಟನೆಗಿಳಿದಿದ್ದಾರೆ.
ಹೈದ್ರಾಬಾದ್’ನ ಒಸ್ಮಾನಿಯಾ ಜನರಲ್ ಆಸ್ಪತ್ರೆಯ ಜ್ಯೂನಿಯರ್ ಡಾಕ್ಟರ್’ಗಳು ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಅಗತ್ಯ ಸೌಲಭ್ಯಗಳಿಲ್ಲ, ಅಗತ್ಯವಾದಷ್ಟು ಬೆಡ್ ಗಳಿಲ್ಲ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಗ್ಲೌಸ್ ಸೇರಿದಂತೆ ಯಾವುದೇ ಉಪಕರಣಗಳು ಇಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ.
ವೈದ್ಯಕೀಯ ಉಪಕರಣಗಳು ಮಾತ್ರವಲ್ಲ ಸಿಬ್ಬಂದಿಗೆ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲ. ಹೀಗಾಗಿ ನಾವು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದಿದ್ದಾರೆ.
ಸೌಲಭ್ಯಕ್ಕಾಗಿ ವೈದ್ಯರ ಪ್ರೊಟೆಸ್ಟ್
Follow Us