Sunday, December 5, 2021

ಹಾವಿನಿಂದ ಮಾಲಕನ ಪ್ರಾಣ ಉಳಿಸಿ ಪ್ರಾಣತೆತ್ತ ನಾಯಿ

Follow Us

ಖಮ್ಮಂ:  ನಿಷ್ಠೆಗೆ ನಾಯಿಯಷ್ಟು ಹೆಸರುವಾಸಿಯಾದ ಪ್ರಾಣಿ ಬೇರೊಂದಿಲ್ಲ. ತನ್ನ ಮಾಲಕನ ಪ್ರಾಣ ಉಳಿಸಲು ನಾಯಿ ಪ್ರಾಣ ತ್ಯಾಗಮಾಡಿದ ಹಲವು ಉದಾಹರಣೆಗಳಿವೆ. ಇಂತಹ ಒಂದು ಘಟನೆ ಖಮ್ಮಂ ನಲ್ಲಿ ನಡೆದಿದೆ. ಇಲ್ಲಿನ ಕಲ್ಲೂರ್ ಎಂಬಲ್ಲಿ ವೈದ್ಯರಾಗಿರುವ ಕಿಶೋರ್ ನಾಯಿ ಮರಿಯೊಂದನ್ನು ಸಾಕಿದ್ದರು. ಅದಕ್ಕೆ ಪ್ರೀತಿಯಿಂದ  ಸೂಫ್ನಿ ಎಂದು ಕರೆಯುತ್ತಿದ್ದರು. ಕಳೆದ ಭಾನುವಾರ ಕಿಶೋರ್ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ  ವಿಷದ ಹಾವೊಂದು ಅವರ ಮನೆ ಪ್ರವೇಶಿಸಿತು. ಹಾವನ್ನು ನೋಡಿದ ನಾಯಿ ಕೂಡಲೇ ಅದರ ದಾರಿಯನ್ನು ಅಡ್ಡಗಟ್ಟಿ ಹಾವನ್ನು ತ಼ಡೆಯಲು ಯತ್ನಿಸಿತ್ತು.  ಹಾವು ಮತ್ತು ನಾಯಿ ಮಧ್ಯೆ ಜಗಳ ನಡೆದುಹೋಯಿತು. ಹಾವು ಕಚ್ಚಿದರೂ ನಾಯಿ ಅದನ್ನು ಮುಂದೆ ಹೋಗಲು ಬಿಡಲಿಲ್ಲ. ಶಬ್ದ ಕೇಳಿ ಕಿಶೋರ್ ಅವರಿಗೆ ಎಚ್ಚರವಾಯಿತು. ಅವರು ಬಂದು ನೋಡಿದಾಗ ಹಾವು ಕಣ್ಣಿಗೆ ಬಿತ್ತು. ಕೂಡಲೇ ಹಾವನ್ನು ಕೊಂದರು. ಅಷ್ಟರಲ್ಲಿಯೇ ಕಾದಾಡಿದ ನಾಯಿ ಅಲ್ಲಿ ಬಸವಳಿದು ಬಿದ್ದಿತ್ತು. ಪ್ರಾಣ ಹಾರಿ ಹೋಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!