ಮುಂಬೈ: ಡಾಕ್ಟರ್ ಬಾಂಬ್ ಎಂದೇ ಕುಖ್ಯಾತಿ ಪಡೆದಿರುವ 69 ವರ್ಷ ಪ್ರಾಯದ ಡಾ. ಜಲೀಸ್ ಅನ್ಸಾರಿ ನಾಪತ್ತೆಯಾಗಿದ್ದಾನೆ. ದೇಶದ ವಿವಿಧೆಡೆ ನಡೆದ 50ಕ್ಕೂ ಹೆಚ್ಚು ಬಾಂಬ್ ಸ್ಫೋಟದಲ್ಲಿ ಈತನ ಕೈವಾಡ ಇದೆ. 1993 ಡಿಸೆಂಬರ್ 5 ಮತ್ತು 6 ರಂದು ರಾಜಸ್ತಾನದಲ್ಲಿ ರಾಜಧಾನಿ ರೈಲ್ಲಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರೋಲ್ ಮೇಲೆ ಜೈಲ್ಲಿನಿಂದ ಹೊರ ಬಂದಿದ್ದ ಅನ್ಸಾರಿ, ಮನೆಯಿಂದ ತಪ್ಪಿಸಿಕೊಂಡಿದ್ದಾನೆ.
ಗುರುವಾರ ಮುಂಜಾನೆ ಮನೆಯಿಂದ ತೆರಳಿದ್ದ ಅನ್ಸಾರಿ ಆ ಬಳಿಕ ಮನೆಗೆ ಹಿಂತಿರುಗಲಿಲ್ಲ. ಡಾಕ್ಟರ್ ಬಾಂಬ್ ನಾಪತ್ತೆ ಹಿನ್ನೆಲೆಯಲ್ಲಿ ಮುಂಬೈನ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ತನಿಖಾ ದಳ ಶೋಧ ಕಾರ್ಯದಲ್ಲಿ ನಿರತವಾಗಿವೆ.